Home » Kannada News » Salman Khan: ಗಂಡ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಕ್ಕೆ ಹೆಂಡ್ತಿ ತಂಟೆಗೆ ಬಂದ ನಟ ಸಲ್ಮಾನ್ ಖಾನ್!

Salman Khan: ಗಂಡ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಕ್ಕೆ ಹೆಂಡ್ತಿ ತಂಟೆಗೆ ಬಂದ ನಟ ಸಲ್ಮಾನ್ ಖಾನ್!

ಹೈಲೈಟ್ಸ್‌:

  • ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬಂತು ಕೆಲ ನೆಗೆಟಿವ್ ಕಾಮೆಂಟ್ಸ್‌
  • ನೆಗೆಟಿವ್ ಕಾಮೆಂಟ್ಸ್‌ಗೆ ಉತ್ತರ ನೀಡಿದ ಸಲ್ಮಾನ್ ಖಾನ್
  • ಅರ್ಬಾಜ್ ಖಾನ್ ಶೋನಲ್ಲಿ ಸಾಕಷ್ಟು ವಿಷಯ ಹಂಚಿಕೊಂಡ ‘ಬಾಲಿವುಡ್‌ನ ಬ್ಯಾಡ್‌ಬಾಯ್’
  • ಸಲ್ಮಾನ್ ಖಾನ್ ನಟನೆಯ ಕೆಲ ಸಿನಿಮಾ ರಿಲೀಸ್ ಆಗಬೇಕಿವೆ

ನಟ ಸಲ್ಮಾನ್ ಖಾನ್‌ ಫೇಕ್, ಕೆಟ್ಟ ಸಿನಿಮಾ ಮಾಡಿ ಆತ ದುಡ್ಡು ಮಾಡ್ತಾನೆ, ಒಳ್ಳೆಯ ವ್ಯಕ್ತಿಯಂತೆ ನಾಟಕ ಮಾಡ್ತಾನೆ ಎಂದರೆ ‘ಬಾಲಿವುಡ್‌ನ ಬ್ಯಾಡ್‌ಬಾಯ್‌’ ಸುಮ್ಮನಿರುತ್ತಾರಾ? ಸಾಧ್ಯವೇ ಇಲ್ಲ. ಸಹೋದರ ಅರ್ಬಾಜ್ ಖಾನ್ ಟಾಕಿಂಗ್ ಶೋನಲ್ಲಿ ಭಾಗವಹಿಸಿದ್ದ ಸಲ್ಮಾನ್‌ ಖಾನ್‌ಗೆ ಈ ರೀತಿಯ ಕಾಮೆಂಟ್‌ಗಳನ್ನು ವ್ಯಕ್ತಿಯೊಬ್ಬ ತನಗೆ ಮಾಡಿದ್ದಾನೆ ಎಂದು ಗೊತ್ತಾದಾಗ ಖಾರವಾಗಿ ಅವರದೇ ಆದ ಸ್ಟೈಲ್‌ನಲ್ಲಿ ಉತ್ತರ ನೀಡಿದ್ದಾರೆ.

ಕಾಮೆಂಟ್‌ಗಳಿಗೆ ಸಲ್ಮಾನ್ ಖಾನ್ ಉತ್ತರ
ಟಾಕಿಂಗ್ ಶೋನಲ್ಲಿ ಅರ್ಬಾಜ್ ಜೊತೆಗೆ ಸಲ್ಮಾನ್‌ ಸಾಕಷ್ಟು ವಿಷಯಗಳ ಕುರಿತು ಚರ್ಚೆ ಮಾಡಿದ್ದಾರೆ. ಆ ವೇಳೆ ತನಗೆ ದುಬೈನಲ್ಲಿ ಪತ್ನಿ ಇರೋದು, 17 ವರ್ಷದ ಮಗಳು ಇರೋದು ಸುಳ್ಳು ಎಂದು ಕೂಡ ಅವರು ಹೇಳಿದ್ದಾರೆ. ತಾನು ಫೇಕ್, ಕೆಟ್ಟ ಸಿನಿಮಾ ಮಾಡ್ತೀನಿ ಎಂದ ನೆಟ್ಟಿಗನಿಗೆ ಸಲ್ಮಾನ್ ಖಾನ್ ತನ್ನದೇ ಆದ ಶೈಲಿಯಲ್ಲಿ ಅವರು ಉತ್ತರ ನೀಡಿದ್ದಾರೆ.

ದುಬೈನಲ್ಲಿ ಪತ್ನಿ, 17 ವರ್ಷದ ಮಗಳಿರುವ ವಿಷಯ ಮುಚ್ಚಿಟ್ಟಾದ್ದಾರಾ ಸಲ್ಮಾನ್ ಖಾನ್? ನಟ ಹೇಳಿದ್ದೇನು?

ಕಾಮೆಂಟ್ ಮಾಡಿದ ವ್ಯಕ್ತಿಯ ಪತ್ನಿ ಬಗ್ಗೆ ಸಲ್ಮಾನ್ ಖಾನ್ ಉತ್ತರ
“ಕಾಮೆಂಟ್ ಮಾಡಿದ ವ್ಯಕ್ತಿಯ ಪತ್ನಿ ನನ್ನ ಅಭಿಮಾನಿ ಆಗಿ, ನನ್ನ ಬಗ್ಗೆ ಕೆಲ ಮಾತುಗಳನ್ನು ಆಡಿರಬಹುದು, ಆತನ ಮಗಳಿಗೆ ನನ್ನ ಮೇಲೆ ಲವ್ ಇರಬಹುದು, ನಾನು ಸಲ್ಮಾನ್ ಸಿನಿಮಾ ನೋಡಲು ಹೋಗ್ತೀನಿ ಅಂತ ಅವನ ಮಗಳು ಅತ್ತಿರಬಹುದು. ನಾನು ಕೂಡ ಕೆಲವೊಮ್ಮೆ ಅವನನ್ನು ತಿರಸ್ಕರಿಸಬಹುದು. ನಾನು ಏನೇ ಮಾಡಿದರೂ ಕೂಡ ಆತನಿಗೆ ಈ ರೀತಿ ಅನುಭವ ಆಗಿರೋದಕ್ಕೆ ಅವನು ಹೇಳುವುದೆಲ್ಲ ಸಮರ್ಥನೀಯ ಎನಿಸುತ್ತದೆ” ಎಂದು ಸಲ್ಮಾನ್ ಹೇಳಿದ್ದಾರೆ.

ನಾನು ಎಂಟು ವರ್ಷ ಪ್ರೀತಿಸಿ ಬಿಟ್ಟ ಮೇಲೆ ಸಲ್ಮಾನ್ ಖಾನ್‌ಗೆ ಎಷ್ಟು ಗರ್ಲ್‌ಫ್ರೆಂಡ್ ಆಯ್ತೋ ಏನೋ ಎಂದ ನಟಿ!

ಕೆಟ್ಟ ಸಿನಿಮಾ ಮಾಡಿ ಸಲ್ಮಾನ್ ದುಡ್ಡು ಮಾಡ್ತಾನೆ ಎಂದಿದ್ದಕ್ಕೆ ಬ್ಯಾಡ್‌ಬಾಯ್ ಹೇಳಿದ್ದೇನು?
ಕೆಟ್ಟ ಸಿನಿಮಾ ಮಾಡಿ ದುಡ್ಡು ಮಾಡ್ತಾನೆ, ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾನೆ ಎಂದು ಕೂಡ ಸಲ್ಮಾನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಲಾಗಿತ್ತು. ಅದರ ಬಗ್ಗೆ ಮಾತನಾಡಿದ ಸಲ್ಮಾನ್ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಹಾಗೂ ಒಳ್ಳೆಯ ಮುಖಗಳಿರುತ್ತವೆ ಎಂದಿದ್ದಾರೆ.

ಆಗಾಗ ಸಲ್ಮಾನ್‌ ಖಾನ್ ಕೆಲ ವಿವಾದಗಳಿಗೆ ಈಡಾಗುತ್ತಿರುತ್ತಾರೆ, ಸಿನಿಮಾದಲ್ಲಿ ನಟನೆ ಜೊತೆಗೆ ಅವರ ಎನ್‌ಜಿಒ ಮೂಲಕ ಸಾಮಾಜಿಕ ಕೆಲಸಗಳನ್ನು ಕೂಡ ಮಾಡುತ್ತಿರುತ್ತಾರೆ. ಸಲ್ಮಾನ್ ಖಾನ್ ನಟನೆಯ ‘ಆಂಟಿಮ್; ದಿ ಫೈನಲ್ ಟ್ರುಥ್’, ‘ಲಾಲ್ ಸಿಂಗ್ ಛಡ್ಡಾ’, ‘ಪಠಾಣ್’, ‘ಟೈಗರ್ 3’ ಸಿನಿಮಾಗಳು ರಿಲೀಸ್ ಆಗಬೇಕಿವೆ.


Source link

x

Check Also

Nithya Bhavishya: ಈ ಎರಡು ರಾಶಿಯವರಿಗಿಂದು ಅದೃಷ್ಟದ ದಿನ..! ನಿಮ್ಮ ದಿನ ಹೇಗಿದೆ..?

2021 ಜುಲೈ 24 ರ ಶನಿವಾರವಾದ ಇಂದು, ಶನಿಯೊಂದಿಗೆ ಶನಿಯ ಗ್ರಹವಾದ ಮಕರ ರಾಶಿಯಲ್ಲಿ ಚಂದ್ರನು ಇರುತ್ತಾನೆ. ಶನಿ ಮತ್ತು ...