Home » Kannada News » ತೆರಿಗೆ ವಂಚನೆ ಆರೋಪ: ದೈನಿಕ್ ಭಾಸ್ಕರ್, ಭಾರತ್ ಸಮಾಚಾರ್ ಮಾಧ್ಯಮ ಸಂಸ್ಥೆಗಳ ಮೇಲೆ ಐಟಿ ದಾಳಿ

ತೆರಿಗೆ ವಂಚನೆ ಆರೋಪ: ದೈನಿಕ್ ಭಾಸ್ಕರ್, ಭಾರತ್ ಸಮಾಚಾರ್ ಮಾಧ್ಯಮ ಸಂಸ್ಥೆಗಳ ಮೇಲೆ ಐಟಿ ದಾಳಿ

ಹೈಲೈಟ್ಸ್‌:

  • ಮಾಧ್ಯಮ ಸಂಸ್ಥೆಗಳಿಂದ ತೆರಿಗೆ ವಂಚನೆ ಆರೋಪದಲ್ಲಿ ಐಟಿ ದಾಳಿ
  • ದೈನಿಕ್ ಭಾಸ್ಕರ್‌ ಸಮೂಹದ 35 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ
  • ಉತ್ತರ ಪ್ರದೇಶದ ಭಾರತ್ ಸಮಾಚಾರ್ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ
  • ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ನಿರಂತರ ಸುದ್ದಿಗಳನ್ನು ಪ್ರಕಟ

ಹೊಸದಿಲ್ಲಿ: ದೈನಿಕ್ ಭಾಸ್ಕರ್ ಮಾಧ್ಯಮ ಸಮೂಹಕ್ಕೆ ಸೇರಿದ ವಿವಿಧ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ದಿಲ್ಲಿ ಮತ್ತು ಗುಜರಾತ್‌ಗಳ 35 ಸ್ಥಳಗಳಲ್ಲಿ ದಾಳಿ ನಡೆದಿದೆ.

ಇದಲ್ಲದೆ, ಉತ್ತರ ಪ್ರದೇಶದ ಲಕ್ನೋದಲ್ಲಿರುವ ಟೆಲಿವಿಷನ್ ಚಾನೆಲ್ ಭಾರತ್ ಸಮಾಚಾರ್ ಕಚೇರಿ ಹಾಗೂ ಅದರ ಮಾಲೀಕ, ಮುಖ್ಯ ಸಂಪಾದಕರ ಮನೆಯ ಮೇಲೆ ಕೂಡ ಐಟಿ ದಾಳಿ ನಡೆದಿದ್ದು, ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಆದಾಯ ತೆರಿಗೆದಾರರಿಗೆ ಬಿಗ್‌ ರಿಲೀಫ್‌: 15CA, 15CB ಫಾರ್ಮ್‌ ಸಲ್ಲಿಕೆಗೆ ಗಡುವು ವಿಸ್ತರಣೆ!
ದೈನಿಕ್ ಭಾಸ್ಕರ್ ಪತ್ರಿಕೆ ಹಾಗೂ ಭಾರತ್ ಸಮಾಚಾರ್ ಸುದ್ದಿ ವಾಹಿನಿಗಳು ಗಂಗಾ ನದಿಯಲ್ಲಿ ಸಾಲು ಸಾಲು ಮೃತ ದೇಹಗಳು ತೇಲಿ ಬರುತ್ತಿರುವುದರ ಬಗ್ಗೆ ಹಾಗೂ ಉತ್ತರ ಪ್ರದೇಶದಲ್ಲಿನ ಕೋವಿಡ್ 19 ಸಾವುಗಳ ಬಗ್ಗೆ ಸರಣಿ ವರದಿಗಳನ್ನು ಬಿತ್ತರಿಸಿದ್ದವು. ಭಾರತ್ ಸಮಾಚಾರ್ ವಾಹಿನಿ ಯೋಗಿ ಆದಿತ್ಯನಾಥ್ ಸರಕಾರವನ್ನು ಕಟುವಾಗಿ ಟೀಕಿಸುತ್ತಿತ್ತು. ತೆರಿಗೆ ವಂಚನೆ ಆರೋಪದಡಿ ಈ ದಾಳಿಗಳು ನಡೆದಿವೆ ಎಂದು ಐಟಿ ಮೂಲಗಳು ತಿಳಿಸಿವೆ.

ಭಾರತ್ ಸಮಾಚಾರ್ ಸುದ್ದಿ ವಾಹಿನಿಯ ಕಚೇರಿ ಮೇಲೆ 6-7 ಸದಸ್ಯರ ತಂಡ ದಾಳಿ ನಡೆಸಿದೆ. ಅದರ ಮಾಲೀಕರ ಮನೆಯಲ್ಲಿ ಕೂಡ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಇದು ಸ್ವತಂತ್ರ ಪತ್ರಿಕೋದ್ಯಮದ ಮೇಲಿನ ದಾಳಿ ಎಂದು ವಾಹಿನಿ ಆರೋಪಿಸಿದೆ.

‘ತನ್ನ ವರದಿಗಳ ಮೂಲಕ ಮೋದಿ ಸರಕಾರವು ಕೋವಿಡ್ 19 ಸಾಂಕ್ರಾಮಿಕವನ್ನು ತಪ್ಪಾಗಿ ನಿರ್ವಹಿಸುತ್ತಿರುವುದನ್ನು ದೈನಿಕ್ ಭಾಸ್ಕರ್ ಬಯಲಿಗೆಳೆದಿತ್ತು. ಈಗ ಅದಕ್ಕೆ ಬೆಲೆ ತೆರುವಂತಾಗಿದೆ. ಅರುಣ್ ಶೌರಿ ಅವರು ಹೇಳಿರುವಂತೆ ಅಘೋಷಿತ ತುರ್ತುಪರಿಸ್ಥಿತಿ- ಇದು ಮೋದಿಫೈಡ್ ತುರ್ತುಪರಿಸ್ಥಿತಿ’ ಎಂದು ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಟೀಕಿಸಿದ್ದಾರೆ.


Source link

x

Check Also

ಭಾರತ ತಂಡದಲ್ಲಿ ಐವರಿಗೆ ಚೊಚ್ಚಲ ಚಾನ್ಸ್‌ ನೀಡಲು ಕಾರಣ ತಿಳಿಸಿದ ಧವನ್‌!

ಹೈಲೈಟ್ಸ್‌: ಭಾರತ ಹಾಗೂ ಶ್ರೀಲಂಕಾ ನಡುವಿನ ಓಡಿಐ ಸರಣಿ ಶುಕ್ರವಾರ ಅಂತ್ಯವಾಗಿದೆ. ಮೂರನೇ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ 3 ...