Home » Kannada News » ಗಿಲ್‌ ಬಳಿಕ ಭಾರತದ ವೇಗಿ ಅವೇಶ್ ಖಾನ್‌ ಕೂಡ ಇಂಗ್ಲೆಂಡ್‌ ಪ್ರವಾಸದಿಂದ ಔಟ್‌!

ಗಿಲ್‌ ಬಳಿಕ ಭಾರತದ ವೇಗಿ ಅವೇಶ್ ಖಾನ್‌ ಕೂಡ ಇಂಗ್ಲೆಂಡ್‌ ಪ್ರವಾಸದಿಂದ ಔಟ್‌!

ಹೈಲೈಟ್ಸ್‌:

  • ಭಾರತ-ಇಂಗ್ಲೆಂಡ್‌ ನಡುವಣ ಐದು ಪಂದ್ಯಗಳ ಟೆಸ್ಟ್‌ ಕ್ರಿಕೆಟ್ ಸರಣಿ.
  • ಕೌಂಟಿ ಸೆಲೆಕ್ಟ್‌ ವಿರುದ್ಧ ಅಭ್ಯಾಸ ಪಂದ್ಯವನ್ನಾಡುತ್ತಿರುವ ಟೀಮ್ ಇಂಡಿಯಾ.
  • ಫೀಲ್ಡಿಂಗ್‌ ವೇಳೆ ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ಅವೇಶ್ ಖಾನ್.

ಹೊಸದಿಲ್ಲಿ: ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿ ಸಲುವಾಗಿ ಟೀಮ್ ಇಂಡಿಯಾ ಸಮರಾಭ್ಯಾಸ ನಡೆಸುತ್ತಿದೆ. ಈ ಸಲುವಾಗಿ ಕೌಂಟಿ ಸೆಲೆಕ್ಟ್‌ ಇಲೆವೆನ್ ವಿರುದ್ಧ 3 ದಿನಗಳ ಪ್ರಥಮದರ್ಜೆ ಪಂದ್ಯವನ್ನಾಡುತ್ತಿರುವ ಭಾರತ ತಂಡಕ್ಕೆ ಆಘಾತ ಒಂದು ಎದುರಾಗಿದ್ದು, ಬ್ಯಾಕ್‌ಅಪ್‌ ಬೌಲರ್‌ ಆಗಿದ್ದ ಬಲಗೈ ವೇಗಿ ಅವೇಶ್ ಖಾನ್‌ ಗಾಯಗೊಂಡು ಮುಂಬರುವ ಸರಣಿಯಿಂದ ಹೊರಬಿದ್ದಿದ್ದಾರೆ.

ಡುರ್ಹ್ಯಾಮ್‌ನ ರಿವರ್‌ಸೈಡ್‌ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ಸಾರಥ್ಯದ ಇಂಡಿಯಾ ಇಲೆವೆನ್ ಮತ್ತು ಕೌಂಟಿ ಸೆಲೆಕ್ಟ್‌ ಇಲೆವೆನ್‌ ನಡುವೆ ಅಭ್ಯಾಸ ಪಂದ್ಯ ನಡೆಯುತ್ತಿದೆ. ಪಂದ್ಯದ ಮೊದಲ ದಿನವಾದ ಜುಲೈ 20 (ಮಂಗಳವಾರ) ಕೌಂಟಿ ತಂಡದ ಪರ ಆಡುತ್ತಿದ್ದ ಅವೇಶ್‌ ಖಾನ್‌ ಫೀಲ್ಡಿಂಗ್‌ ವೇಳೆ ಎಡಗೈ ಹೆಬ್ಬೆರಳು ಮುರಿದುಕೊಂಡಿದ್ದಾರೆ.

ಟೀಮ್ ಇಂಡಿಯಾ ಆಟಗಾರರಿಗೆ ಹೆಚ್ಚು ಮ್ಯಾಚ್‌ ಪ್ರಾಕ್ಟೀಸ್‌ ಒದಗಿಸುವ ಉದ್ದೇಶದಿಂದ ಅವೆಶ್‌ ಖಾನ್ ಮತ್ತು ವಾಷಿಂಗ್ಟನ್‌ ಸುಂದರ್‌ಗೆ ಕೌಂಟಿ ತಂಡದಲ್ಲಿ ಆಡುವ ಅವಕಾಶ ಮಾಡಿಕೊಳಡಾಗಿತ್ತು. ಇದೀಗ ಗಾಯದ ಸಮಸ್ಯೆ ಬಗ್ಗೆ ವೈದ್ಯಕೀಯ ವರದಿ ಬಂದ ಬಳಿಕ ಅವೇಶ್ ಸರಣಿಯಲ್ಲಿ ಪಾಲ್ಗೊಳ್ಳುವುದು ಸಾಧ್ಯವಿಲ್ಲ ಎಂಬುದು ತಿಳಿದುಬಂದಿದೆ. ಕೌಂಟಿ ಸೆಲೆಕ್ಟ್‌ ತಂಡದ ಕೆಲ ಆಟಗಾರರು ಕೋವಿಡ್‌-19 ಕಾರಣ ಕ್ವಾರಂಟೈನ್‌ನಲ್ಲಿ ಇದ್ದ ಕಾರಣ ಅವೇಶ್‌ ಖಾನ್ ಮತ್ತು ವಾಷಿಂಗ್ಟನ್‌ ಸುಂದರ್‌ಗೆ ಭಾರತದ ಎದುರಾಳಿಗಳಾಗಿ ಆಡುವ ಅವಕಾಶ ಲಭ್ಯವಾಯಿತು.

ಸೂರ್ಯಕುಮಾರ್‌ ಬ್ಯಾಟಿಂಗ್‌ ಕಂಡು ಬೆರಗಾದ ಕಮ್ರಾನ್‌ ಅಕ್ಮಲ್‌!

“ಅವೇಶ್‌ ಖಾನ್‌ ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಪಾಲ್ಗೊಳ್ಳುವುದಿಲ್ಲ. ಅಭ್ಯಾಸ ಪಂದ್ಯ ಬಿಡಿ. ಎಡ ಹೆಬ್ಬೆರಳು ಮುರಿದಿದೆ. ಪುನಶ್ಚೇತನ ಶಿಬಿರ ಆರಂಭವಾಗುವ ಮುನ್ನ ಒಂದು ತಿಂಗಳವರೆಗೆ ಅವರಿಂದ ಬೌಲಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಇನ್ನು ಮೂರು ದಿನಗಳಲ್ಲಿ ಅಧಿಕೃತ ಮಾಹಿತಿ ಹೊರಬರಲಿದೆ,” ಎಂದು ಈ ಬೆಳವಣಿಗೆಗೆ ಹತ್ತಿರದ ಬಿಸಿಸಿಐ ಮೂಲಗಳು ಹೇಳಿವೆ.

“ವೇಗದ ಬೌಲರ್‌ ಅವೇಶ್‌ ಖಾನ್‌ ಅವರನ್ನು ವೈದ್ಯಕೀಯ ತಂಡ ಪರಿಶೀಲನೆಯಲ್ಲಿ ಇರಿಸಿದೆ. ಕೌಂಟಿ ಸೆಲೆಕ್ಟ್‌ ಇಲೆವೆನ್‌ ವಿರುದ್ಧದ 3 ದಿನಗಳ ಅಭ್ಯಾಸ ಪಂದ್ಯದಲ್ಲಿ ಅವರು ಆಡುವುದಿಲ್ಲ,” ಎಂದು ಬಿಸಿಸಿಐ ಈ ಮೊದಲು ಟ್ವೀಟ್‌ ಮೂಲಕ ಮಾಹಿತಿ ನೀಡಿತ್ತು. ಮೊದಲ ದಿನದಾಟದ ಭೋಜನ ವಿರಾಮದ ಬಳಿಕ ತಮ್ಮ 10ನೇ ಓವರ್‌ ಬೌಲಿಂಗ್ ಮಾಡುವ ವೇಳೆ ಹನುಮ ವಿಹಾರಿ ಹೊಡೆದ ಚೆಂಡನ್ನು ತಡೆಯುವ ಪ್ರಯತ್ನ ಮಾಡಿ ಕೈಬೆರಳಿಗೆ ಗಾಯ ಮಾಡಿಕೊಂಡರು.

ಐಸಿಸಿ ಒಡಿಐ ರ‍್ಯಾಂಕಿಂಗ್‌: 16ನೇ ಸ್ಥಾನಕ್ಕೇರಿದ ಶಿಖರ್‌ ಧವನ್!

24 ವರ್ಷದ ಬಲಗೈ ವೇಗದ ಬೌಲರ್‌ 26 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 100 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ. ಆಗಸ್ಟ್‌ 4ರಂದು ನಾಟಿಂಗ್‌ಹ್ಯಾಮ್‌ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್‌ ವಿರುದ್ದದ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಚೊಚ್ಚಲ ಟೆಸ್ಟ್‌ ಆಡುವ ಅತ್ಯುತ್ತಮ ಅವಕಾಶ ಹೊಂದಿದ್ದರು.

ಇಂಗ್ಲೆಂಡ್‌ ವಿರುದ್ಧದ ಸರಣಿಗೆ ಭಾರತ ತಂಡ ಹೀಗಿದೆ
ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ರೋಹಿತ್ ಶರ್ಮಾ, ಶುಭಮನ್ ಗಿಲ್ (ಗಾಯಗೊಂಡು ಸರಣಿಯಿಂದ ಔಟ್), ಮಾಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆಟ್‌ಕೀಪರ್‌), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್‌ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಕೆಎಲ್‌ ರಾಹುಲ್ ಮತ್ತು ವೃದ್ಧಿಮಾನ್ ಸಹಾ
ಕಾಯ್ದಿರಿಸಿದ ಆಟಗಾರರು: ಪ್ರಸಿಧ್ ಕೃಷ್ಣ, ಅಭಿಮನ್ಯು ಈಶ್ವರನ್, ಅರ್ಝಾನ್ ನಾಗವಾಸವಾಲ, ಅವೇಶ್ ಖಾನ್ (ಗಾಯಗೊಂಡು ಸರಣಿಯಿಂದ ಔಟ್).

ಭಾರತ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಇಂಗ್ಲೆಂಡ್‌ ತಂಡ ಹೀಗಿದೆ
ಜೋ ರೂಟ್ (ಯಾರ್ಕ್‌ಶೈರ್, ನಾಯಕ), ಜೇಮ್ಸ್ ಆಂಡರ್ಸನ್ (ಲಂಕಾಶೈರ್), ಜಾನಿ ಬೈರ್‌ಸ್ಟೋವ್ (ಯಾರ್ಕ್‌ಶೈರ್), ಡಾಮ್ ಬೆಸ್ (ಯಾರ್ಕ್‌ಶೈರ್), ಸ್ಟುವರ್ಟ್ ಬ್ರಾಡ್ (ನಾಟಿಂಗ್‌ಹ್ಯಾಮ್‌ಶೈರ್), ರೋರಿ ಬರ್ನ್ಸ್ (ಸರ್ರೆ), ಜೋಸ್ ಬಟ್ಲರ್ (ಲಂಕಾಶೈರ್), ಝ್ಯಾಕ್‌ ಕ್ರಾವ್ಲೀ (ಕೆಂಟ್), ಸ್ಯಾಮ್ ಕರ್ರನ್ (ಸರ್ರೆ), ಹಸೀಬ್ ಹಮೀದ್ (ನಾಟಿಂಗ್‌ಹ್ಯಾಮ್‌ಶೈರ್), ಡ್ಯಾನ್ ಲಾರೆನ್ಸ್ (ಎಸೆಕ್ಸ್), ಜಾಕ್ ಲೀಚ್ (ಸಮರ್‌ಸೆಟ್), ಓಲ್ಲೀ ಪೋಪ್ (ಸರ್ರೆ), ಓಲ್ಲೀ ರಾಬಿನ್ಸನ್ (ಸಸೆಕ್ಸ್), ಡಾಮ್ ಸಿಬ್ಲಿ (ವಾರ್ವಿಕ್‌ಶೈರ್), ಬೆನ್ ಸ್ಟೋಕ್ಸ್ (ಡುರ್ಹ್ಯಾಮ್), ಮಾರ್ಕ್‌ ವುಡ್‌ (ಡುರ್ಹ್ಯಾಮ್).


Source link

x

Check Also

ಭಾರತ ತಂಡದಲ್ಲಿ ಐವರಿಗೆ ಚೊಚ್ಚಲ ಚಾನ್ಸ್‌ ನೀಡಲು ಕಾರಣ ತಿಳಿಸಿದ ಧವನ್‌!

ಹೈಲೈಟ್ಸ್‌: ಭಾರತ ಹಾಗೂ ಶ್ರೀಲಂಕಾ ನಡುವಿನ ಓಡಿಐ ಸರಣಿ ಶುಕ್ರವಾರ ಅಂತ್ಯವಾಗಿದೆ. ಮೂರನೇ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ 3 ...